ಗುಡಿಯ ಗಾಯಿತ್ರಿ ಮಂತ್ರ,
ಮಸೀದಿಯ ಅಜಾನ್,
ಮೈಕಿನಲ್ಲಿ ಮೊಳಗಿ,
ಅವರವರ ಕಿವಿಯ ತುಂಬಿತ್ತು,
ಕಾರ್ಖಾನೆಯ ಸೈರನ್ ಮೊಳಗಿ,
ಇಬ್ಬರ ಹೊಟ್ಟೆ ತುಂಬಿತು.
ಕಾಯಕ ಕೈಲಾಸವೇ ಸರಿ.

- ಬಂಡಾಯದ ಗುಂಡಿಗೆ
#ಬಿಡುಗಡೆಯಬೆಳಕನುಚೆಲ್ಲೋ_ಬಂಡಾಯದಗುಂಡಿಗೆ #KannadaPoetry #ಕನ್ನಡಪದ್ಯ #ಬೆವರಹಾಡು

ನೆನಪುಗಳನ್ನೆಲ್ಲಾ
ಈ ಬಿರುಸು
ಮಳೆಯಲ್ಲಿ
ತೊಳೆಯುತ್ತಿದ್ದೇನೆ,
ನಾಳೆ
ಕೊಳ ಸೇರಿ
ನೈದಿಲೆಗಳರಳಿದರೆ
ಎಂಬ
ಭಯ!

~ ಮಂಜಿನ ಹನಿ
Inspired by: @[email protected] 's tweet.
#KannadaPoetry #ಕನ್ನಡಪದ್ಯ #BengaluruRains

ನನ್ನ ತೀರದ ದಾಹಕ್ಕೆ
ನಿನ್ನ
ಪ್ರೀತಿಯೊಂದೇ ಮದ್ದು,
ಕಣ್ಣಿಂದ ಕುಡಿದರೆ
ದಾಹ ತೀರುವುದೆಂತು?

~ ಮಂಜಿನ ಹನಿ
#ಕನ್ನಡಕವಿತೆ #KannadaPoetry #poetrycommunity

ಆ ಕಿನಾರೆಗೆ ಹಡಗುಗಳನ್ನೇ
ಕಳಿಸಬೇಕು,
ಅವಳ ನೆನಪುಗಳು
ಉಮ್ಮಳಿಸಿ ಬರುವಾಗ
ಅಲೆಗಳ ಅಬ್ಬರಕೆ
ಚಲ್ಲಾಪಿಲ್ಲಿಯಾದರೆ ಎಂಬ ಭಯ
- ಹಡಗುಗಳು
ಒಂದೂ ತೀರ ಮುಟ್ಟಿಲ್ಲ,
ತೇಲಿ ಬಿಟ್ಟರೆ ತಾನೆ?

~ ಮಂಜಿನ ಹನಿ

#ವೀಕೆಂಡ್_ಪದ್ಯ #KannadaPoetry #poetrycommunity #ವಿರಹದ_ಅಡಗು

ಇದು ಬರೆದು
ಮುಗಿಸುವುದಾದರೆ
ಚೆಂದವಿತ್ತಲ್ಲ ಗೆಳತಿ?
ಬರೆದು ಬರೆದೂ
ಕೈ ಸೋಲಬೇಕಷ್ಟೆ,
ಮುಗಿಯುವುದಿಲ್ಲ;
ವಿರಹವೆಂದರೆ
ಹರಡಿರುವ ಆಕಾಶ!

#ವೀಕೆಂಡ್_ಕವಿತೆ #KannadaPoetry #poetrycommunity #ವಿರಹ_ಆಕಾಶ

ನನ್ನ ಕವಿತೆಗಳಿಗೆ
ಜೀವ ಬಂದರೆ?
ಎಂಬ ಭಯಕ್ಕೆ
ನಿನ್ನನ್ನು ಅತಿಯಾಗಿ
ಪ್ರೀತಿಸುತ್ತೇನೆ,
ನೀನು ನೊಂದುಕೊಂಡರೆ
ಎಂಬ ಅಂಜಿಕೆಗೆ
ಹೇಳದೆ ಇರುತ್ತೇನೆ;
ನನ್ನ ಹಿಪೋಕ್ರೆಸಿಯನ್ನು
ಕ್ಷಮಿಸು ಗೆಳತಿ!

~ ಮಂಜಿನ ಹನಿ

#ವೀಕೆಂಡ್_ವರಾತ #ವಿರಹ #KannadaPoetry #poetrycommunity

ಈ ಕತ್ತಲೆಯೊಳಗೆ
ನರಳಾಟ ಕೇಳಿದರೆ,
ಕತ್ತು ಹಿಸುಕಿ
ಎದೆ ಬಿರಿದಂತಾಗುತ್ತದೆ,
ರಕ್ತವಿಲ್ಲ; ನೋವು.
ನೋವು ಸಾಂಕ್ರಾಮಿಕ!

~ ಮಂಜಿನ ಹನಿ
#poetry #poetrycommunity #kannadapoetry

ಸಾವಿನ ಕುಣಿಕೆಗೆ
ನನ್ನ ಕೊರಳಿಲ್ಲ
ಎಂದು ಹೇಳಲೂ
ಉಸಿರಿಲ್ಲ;
ಆಮ್ಲಜನಕ
ಬಾಡಿಗೆಗೆ ಕೊಡಿ
ಬೋಳಿ ಮಕ್ಕಳೆ!

~ ಮಂಜಿನ ಹನಿ

#ಕೊರೊನಾಕಾಲದಕವಿತೆ #IndiaNeedsOxygen #ModiResignOrRepeal #KannadaPoetry

ಮಳೆಯಲ್ಲಿ ತೊಳೆದ
ಎದೆಯೊಳಗೆ ಕೈಹಾಕಿ
ಹೃದಯ ತೆಗೆದುಕೊಡುವೆ;
ಪ್ರತಿ ಬಾರಿಗೂ
ಒಲವೇ ಉಡುಗೊರೆ,
ನಿನ್ನ ಕಣ್ಣೊಳಗಿನ
ಬೆಳಕಿಗೆ
ನಾನೇ ಸೂರೆ!

~ ಮಂಜಿನ ಹನಿ
#ಜೀವದ_ಗೆಳತಿಗೆ #ಮಳೆಯಕವಿತೆ #KannadaPoetry

ಸೋತು ಸೊರಗುವ
ನೋವ ಸೆರೆಗೆ,
ಜೀವ ಕಟ್ಟುವ
ಜಿನನಣತಿಗೆ,
ದೀಪ ಹಚ್ಚುವ
ಬುದ್ಧ ಪ್ರೀತಿಗೆ,
ಭಾರ ಹೆಚ್ಚುವ
ಅಹಮಿನ ಅಣಕೆಗೆ,
ಕದಲದೆ ಇಳಿದ
ಪದ್ಯವೊಂದಿದೆ,
ಬರೆಯಲಾಗದು
ಬದುಕ ಬೇಕು,
ಬದುಕು ಮುಂದಿದೆ!

--> ಮಂಜಿನ ಹನಿ

2015 ರಲ್ಲಿ ಬರೆದ ಪದ್ಯ. ಈಗೆಲ್ಲಾ ಹೀಗೆ ಬರೆಯುವುದು ಕಷ್ಟ.
#ಕನ್ನಡಪದ್ಯ #Poetry #KannadaPoetry
3/3