Tribute to Dr. Raj through his movies.
#rajkumar #DrRaj

ಬೇಡರ ಕಣ್ಣಪ್ಪ’ನಾಗಿ ತೆರೆಯ ಮೇಲೆ ಬಂದ ಗಾಜನೂರಿನ ಸಿರಿ,

‘ರಣಧೀರ ಕಂಠೀರವ’ನಾಗಿ ಮೆರೆದು,
ವಿನೋಬಾ ಭಾವೆಯವರ ಆಶಯದ ಕಾರಂತರ ‘ಚೋಮನ ದುಡಿ’ಯಿಂದ ಪ್ರಭಾವಿತ, ‘ಭೂದಾನ’ ದ ಕತೆಗೆ ಜೀವ ತುಂಬಿ
‘ಸತ್ಯಹರಿಶ್ಚಂದ್ರ’ನಾಗಿ ಸ್ಮಶಾಣ ಕಾದ ದೊರೆ
ಕರ್ನಾಟಕದ ಹೆಮ್ಮೆಯ ರಾಜ ‘ಇಮ್ಮಡಿ ಪುಲಿಕೇಶಿ’ಯಾಗಿ,
‘ಗಾಂಧಿ ನಗರ’ದಲ್ಲಿ ವಿರಾಜಮಾನನಾದ
‘ವೀರ ಕೇಸರಿ’.
ಹಳ್ಳಿಯಿಂದ ಬಂದು ‘ಮೇಯರ್ ಮುತ್ತಣ್ಣ’ನಾಗಿ
ಗತವೈಭವ ಸಾರುವ ‘ಶ್ರೀ ಕೃಷ್ಣ ದೇವರಾಯ’ನಾದ
‘ಭಲೇ ರಾಜ’
‘ಕಸ್ತೂರಿ ನಿವಾಸ’ದ
‘ಬಂಗಾರದ ಮನುಷ್ಯ’
‘ಜಗ ಮೆಚ್ಚಿದ ಮಗ’ನಾದನು.
‘ಗಂಧದ ಗುಡಿ’ಯೊಳಗೆ
‘ಬಂಗಾರದ ಪಂಜರ’ ಒಡೆದು
‘ಸಂಪತ್ತಿಗೆ ಸವಾಲ್’ ಹಾಕಿದ
ಕದಂಬರ ‘ಮಯೂರ’ ವರ್ಮ. https://t.co/MKUA7WwCrI
~ | ಪ್ರಸಾದ್ | Prasad | ~ on Twitter

“ಕದಂಬರ ‘ಮಯೂರ’ ವರ್ಮ.”

‘ಎರಡು ಕನಸು’ ಕಂಡು
ಭಕ್ತಿ ಪರವಶನಾದ ‘ಭಕ್ತ ಕುಂಬಾರ’
‘ನಾ ನಿನ್ನ ಮರೆಯಲಾರೆ’ ಎಂದು ಹಾಡಿದ
‘ಬಬ್ರುವಾಹನ’ ನನ್ನು
ಕಣ್ತುಂಬಿಕೊಂಡ ನಾವೇ, ‘ಭಾಗ್ಯವಂತರು’.
‘ಸನಾದಿ ಅಪ್ಪಣ್ಣ’ನಾಗಿ
‘ಒಲವು ಗೆಲುವು’ ಎಂದು ಕಲಿಸಿದ
‘ರವಿಚಂದ್ರ’.
‘ಹುಲಿಯ ಹಾಲಿನ ಮೇವು’ ಸವಿದು
‘ಆಪರೇಷನ್ ಡೈಮೆಂಡ್ ರಾಕೆಟ್’ ಹತ್ತಿ
‘ನೀ ನನ್ನ ಗೆಲ್ಲಲಾರೆ’
ಎಂದು ಗುಟುರು ಹಾಕಿದ ‘ಕೆರಳಿದ ಸಿಂಹ’.
‘ಹೊಸ ಬೆಳಕು’ ಕಂಡು
‘ಹಾಲು ಜೇನು’ ನಮಗೆ ಕುಡಿಸಿ https://t.co/LcI71fQDZY
~ | ಪ್ರಸಾದ್ | Prasad | ~ on Twitter

“‘ಹಾಲು ಜೇನು’ ನಮಗೆ ಕುಡಿಸಿ”

‘ಚಲಿಸುವ ಮೋಡಗಳು’ ಮೇಲೆ ಕುಳಿತ https://t.co/ITRkoAYAEi
~ | ಪ್ರಸಾದ್ | Prasad | ~ on Twitter

“‘ಚಲಿಸುವ ಮೋಡಗಳು’ ಮೇಲೆ ಕುಳಿತ”

‘ಕವಿರತ್ನ ಕಾಳಿದಾಸ’.
‘ಒಂದು ಮುತ್ತಿನ ಕಥೆ’ಯೊಳಗೆ
‘ಶೃತಿ ಸೇರಿದಾಗ’
‘ಧೃವ ತಾರೆ’ಯಾಗಿ ಮೆರೆವ

‘ದೇವತಾ ಮನುಷ್ಯ’.

PC: Google.

ಅಣ್ಣವ್ರಿಗೆ ಹುಟ್ಟುಹಬ್ಬದ ಶುಭಾಶಯಗಳು. ಎಲ್ಲಾ ಕನ್ನಡಿಗರಿಗೂ ಡಾ. ರಾಜ್ ಕುಮಾರ್ ಜಯಂತಿಯ ಶುಭಾಶಯಗಳು.

#Rajkumar #DrRajkumar #DrRaj